Saturday, February 22, 2014

Rekkisiri /ರೆಕ್ಕಿಸಿರಿ

Photo 1,2,3 these are symbols to rekkisiri normally at jungle 
2
3

Rekkisi . Inside rekfkisiri  temple 

(In front of rekkesi) offring Cock .
According to tulupaddana Rekkisiri Bloomed from this pottery. (at An Ananthadi Bantvala



ರೆಕ್ಕಿಸಿರಿ/Rekkisiri 


ಮಾತೃವಂಶೀಯ ತುಳುವರ ಕುಲದೈವಗಳಲ್ಲಿ ಲೆಕ್ಕಿಸಿರಿಯೂ ಒಂದು. ಲೆಕ್ಕಸೆರಿ/ರೆಕ್ಕೆಸಿರಿ ಎಂದು ಪಾಡ್ದನಗಳಲ್ಲಿ ನಿರೂಪಣೆಯಾಗುವ ಈ ಕನ್ಯಾ ದೈವಕ್ಕೆ ರಕ್ತೇಶ್ವರಿ ಎಂಬ ವೈದಿಕ ಹೆಸರನ್ನೂ ಆರೋಪಿಸಲಾಗಿದೆ. ರಕ್ತಬೀಜಾಸುರನನ್ನು ಕೊಂದ ದೇವಿ ರಕ್ತೇಶ್ವರಿ ಆದಳು ಎನ್ನುವುದು ನುಡಿ ಕೊಡುವವರ ಮತ್ತು ಮದಿಪು ನೀಡುವವರ ಹೇಳಿಕೆ. ನನ್ನ ಕೃತಿ ‘ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ ‘(ನವ ಕರ್ನಾಟಕ ಪ್ರಕಾಶನ-2012) ಕೃತಿಯಲ್ಲಿ ರೆಕ್ಕೆಸಿರಿಯ 5 ಪರಿಕಲ್ಪನೆ (ಪುಟ 156-161)ಗಳನ್ನು ರೆಕ್ಕೆಸಿರಿ  ಪಾಡ್ದನಗಳ ಮಾಹಿತಿಯನ್ನು ದಾಖಲಿಸಿದ್ದೇನೆ. ಕೆಲವಡೆ ತುಳು ಮಣ್ಣಿನ ಉಪಾಸನೆಯ ರೆಕ್ಕೆಸೆರಿ ವೈದಿಕ ಕಲ್ಪನೆಗೆ ಮತಾಂತರ ಆಗಿರುವ ಬಗ್ಗೆಯೂ ಅಲ್ಲಿ ಪುಟದಲ್ಲಿ ಚರ್ಚಿಸಲಾಗಿದೆ. 

ತುಳು ನೆಲದ ನಂಬಿಕೆಯ ಪ್ರಕಾರ ರೆಕ್ಕಿಸಿರಿ ನೀರಿನಲ್ಲಿ ನೆಗಳೆ ಆಗಿ ಉದಿಸಿ ಬಂದವಳು. ನಿಂಬೆ ಹಣ್ಣಿನ ರೂಪದಲ್ಲಿ ನದಿಯಲ್ಲಿ ತೇಲುತ್ತಾ ಮನೆಗೆ ತಂದವರ ಮನೆಯ ಕಂದೆಲ್ (ಮಣ್ಣಿನ ಕುಂಭ) ನಲ್ಲಿ ಕನ್ಯೆಯಾಗಿ ಪ್ರಕಟಗೊಂಡವಳು. ನನ್ನ ತುಳುವರ ಮೂಲತಾನ ಆದಿ ಆಲಡೆ ಕೃತಿಯಲ್ಲಿ ಕೆಲವು ರೆಕ್ಕಿಸಿರಿಯ ಭಿನ್ನ ಸ್ವರೂಪಗಳನ್ನು ಆಚರಣೆಗಳನ್ನು, ಉಗಮವನ್ನು ದಾಖಲಿಸಿದ್ದೇನೆ. ಜೊತೆಗೆ ತುಳು ಸಂಸ್ಕೃತಿಗೆ ಆದ ವೈದಿಕ ಪ್ರಬಾವವನ್ನೂ ದಾಖಲಿಸಿ " ರಕ್ತ ಬೀಜಾಸುರನನ್ನು ಕೊಂದು ರಕ್ತೇಶ್ವರಿಯಾದೆ " ಎಂಬ ರಕ್ತೇಶ್ವರಿ ಪಾತ್ರಿಯ ನುಡಿಯ ಚರ್ಚೆಯನ್ನು ದಾಕಲಿಸಿದ್ದೇನೆ.  ರಕ್ತೇಶ್ವರಿ ಹೆಸರಿನ ಯಾವ ದೇವಿಯೂ ದೇವಿ ಬಾಗವತದಲ್ಲಿ ಇಲ್ಲ, .ದೇವಿ ಭಾಗವತದ  ಪ್ರಕಾರ ರಕ್ತ ಬೀಜಾಸುರನನ್ನು ಕೊಂದವಳು ಚಂಡಿ. ರೆಕ್ಕೆಸಿರಿಯ 16 ವಸಯಗಳಲ್ಲಿ
Rekkisiri at Deyyole nalike Karkala
ಕಾಳಾ ರಾತ್ರಿಯ ವಸಯ ಒಂದು. ದೇವಿ ಭಾಗವತದ ಪ್ರಕಾರ ಪಾಪ ನಾಶಕರವಾದ 32 ಶಕ್ತಿಗಳಲ್ಲಿ ಕಾಳಾರಾತ್ರಿ 4ನೆಯ ಸ್ಥಾನದಲ್ಲಿ ಇರುವ ಶಕ್ತಿ ದೇವತೆ.
ದಿನಾಂಕ 16-12-2014ರಂದು ರೆಕ್ಕೆಸಿರಿ ಕೋಲವನ್ನು ಪಯಸ್ವಿನಿ ನದಿಯ ದಡದ ಕರ್ನಾಟಕ ಭಾಗದಲ್ಲಿ ನಾನು ನೋಡಿದೆ. ಕೇರಳದ ಪಾತ್ರಧಾರಿಗಳ ಈ ರೆಕ್ಕೆಸರಿ ಸಂಪೂರ್ಣ ವೈದಿಕ ಪರಿಕಲ್ಪನೆಯಲ್ಲಿ ಉಗಮಗೊಂಡಿದೆ. ವೆಂಕಟರಾಜ ಪುಣಿಂಚತ್ತಾಯರ ಪ್ರಕಾರ “ತುಳುನಾಡಿನ ರೆಕ್ಕೆಸಿರಿ ಕೇರಳದಲ್ಲಿ ರಕ್ತೇಶ್ವರಿಯಾದಳು. ರಕ್ತ ಚಾಮುಂಡಿಯಾದಳು. ಆದರೆ ಬಣ್ಣಗಾರಿಕೆ ಬೇರೆ, ಅಣಿಯಲಂಕಾರ ಬೇರೆ. ಪಾಡ್ದನ ಬೇರೆ ಪಾತ್ರಿಗಳೂ ಬೇರೆ. ಈ ಹೊಸ ವಿಕಾಸ ತುಳುನಾಡಿಗರಿಗೂ ಇಷ್ಟವಾಯಿತು. ಅವರೂ ಈ ತೆಯ್ಯಗಳನ್ನು ಆರಾಧಸತೊಡಗಿದರು. ಒಂದು ಕುಂದು ನಲ್ಚತ್ತು ದೈವಗಳ ಗುಂಪಿನಲ್ಲಿ ತಯ್ಯಂ ದೈವಗಳೂ ಸೇರ್ಪಡೆಯಾಗಿವೆ.” (ಸಂ. ರಾಮ ಚಂದ್ರ ಉಚ್ಚಿಲ ಮತ್ತು ಅಮೃತ ಸೋಮೇಶ್ವರ: ಪೂ ಮುಡಿ 1998 ಪು.52)
Kerala Rekkisiri at Tulunadu 


  ತುಳುಸಂಸ್ಕೃತಿಯಲ್ಲಿ ರೆಕ್ಕೆಸೆರಿ ಕೋಲ ಕಟ್ಟುವವರು ನಲ್ಕೆಯವರು ಮತ್ತು ಪರವ ಪಂಬದರು. ಕೇರಳದಲ್ಲಿ ಮಲಯರು ಎನ್ನುವ ಮಲಯಾಲ ಪರಿಶಿಷ್ಟರು. ದೈವ ಸೇವೆಗೆ ನಿಯುಕ್ತಿಗೊಂಡ ಮಲಯರನ್ನು ಪಣಿಕ್ಕರ್ ಎಂದು ನಾಮಕರಣ ಮಾಡಲಾಗುತ್ತದೆ. ಮಲಯನರ ಕೈಗೆ ಚಿನ್ನದ ಬಳೆ ತೊಡಿಸಿ “ಪಣಿಕ್ಕರ್ “- ಎಂದರೆ ದೈವ ಸೇವೆಗೆ ನಿಯುಕ್ತಿಗೊಂಡವರು ಎಂದು ಸಂಕೇತಿಸಲಾಗುತ್ತದೆ.
ಕೋಲದ ಆರಂಭದಲ್ಲಿ (ತೊಡಂಗಲ್)ರೆಕ್ಕೆಸಿರಿಗೆ  ಹಾಡುವ ಸ್ತುತಿ  ಹಾಡು ಸಂಸ್ಕೃತ ಭೂಯಿಷ್ಟವಾದ ಮಲೆಯಾಳಿ  ಸ್ತುತಿಹಾಡು ದೇವಿ ಸ್ತೋತ್ರವಾಗಿದೆ. ರಕ್ತೇಶ್ವರಿಯ ಪಾಡ್ದನದೊಂದಿಗೆ ಸಂಸ್ಕೃತ ಮಿಶ್ರ ಶ್ಲೋಕ :

ಮಾತಮರ್ಮೇ ಮ‍ಧು ಕೈಟವಘ್ನಿ ಮಹಿಷ ಪ್ರಾಣಾಪಹಾರೋದ್ಯಮ
ಹೇಲಾ ನಿರ್ಮಿತ ಧೂಮ್ರ ಲೋಚನವಧೇ ಹೇ ಚಂಡ ಮುಂಡಾರ್ಧಿನಿ
ನಿಶ್ಕೇಷಿಕೃತ ರಕ್ತಬೀಜದನುಜೇ ನಿತ್ಯೇ ನಿಶುಂಭಾಪಹೇ
ಶುಂಭ ಧ್ವಂಸಿನಿ ಸಂಹರಾಶು ದುರಿತಂ ದುರ್ಗೇ ನಮಸ್ತೇಂಬಿಕೇ ……ಪುಣಿಚಂತಾಯರ ಪ್ರಕಾರ ತುಳು ರೆಕ್ಕಿಸೆರಿ ರಕ್ತೇಶ್ವರಿ ಆದುದು ಆರ್ಯ ದ್ರಾವಿಡ ಸಂಸ್ಕೃತಿಗಳ ಮಿಶ್ರಣ.
Malayali Rekkisiri listening Sanskrit Malayali mixed prayer song


 ಮಲೆಯಾಲಿ ರೆಕ್ಕೆಸಿರಿಯ ಕೋಲದ ನೃತ್ಯದ ಹೆಜ್ಜೆಗಳು ದೇವಿ ಸ್ತೋತ್ರಗಳ ವಾದ್ಯ ಸಂಗೀತದ ಜೊತೆ ಹೆಜ್ಜೆ ಯಿಡುತ್ತವೆ. ಹೆಜ್ಜೆಯಲ್ಲಿ ನರ್ತನ ಉತ್ಸಾಹ ಇಲ್ಲ. ಆದರೆ ಗತ್ತುಗಾರಿಕೆ ಇದೆ. ಒಟ್ಟಿನಲ್ಲಿ ಆಕೆ ದುರ್ಗೆ ಎಂಬ ಕಲ್ಪನೆಯಲ್ಲಿ, ನಂಬಿಕೆಯಲ್ಲಿ  ಅಲ್ಲಿ ಕೋಲ ನಡೆಯಿತು. ಕೊನೆಗೆ ಅವಳಿಗೆ ಅರ್ಪಿಸಿದ ಹುಂಜಗಳನ್ನು ಆಕೆ ಮುಟ್ಟಿ  ಅವಳ ಮುಂದೆ ಕೋಳಿ


Offering Cock to rekkisiri 

ಯ ತಲೆಕಡಿದು ರಕ್ತಾಹಾರದ ನೈವೇದ್ಯ ಆಯಿತು. ಅನೇಕ ಹರಕೆಯ ಕೋಳಿಗಳು ಭಕ್ತರಿಂದ ದೇವಿಗೆ ಅರ್ಪಿಸಲಾಯಿತು.

ನಾನು ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಕೆಲವು ರೆಕ್ಕೆಸಿರಿಕೋಲಗಳನ್ನು ನೋಡಿದ್ದೆ. ತುಳು ಭಾಗದಲ್ಲಿ ರೆಕ್ಕೆಸಿರಿ ಕೋಲ ಅಣಿ (ಪ್ರಭಾವಳಿ )7.5 ಕೋಲು (1 ಕೋಲು 2.25ಅಡಿ) ಇರಬೇಕೆಂಬ ನಿಯಮ ಇದ್ದು ಅದರ ತುದಿಯಲ್ಲಿ ಬಿಳಿಯ ಶಾಸ್ತ್ರದ ಹುಂಜ ಕಟ್ಟಬೇಕೆನ್ನುವುದು ಪರಂಪರೆ. ಕೋಲದ ಕೊನೆಯ ಹಂತದಲ್ಲಿ ಈ ಕೋಳಿಯ ತಲೆ ಕಡಿದು  ರೆಕ್ಕೆಸಿರಿಗೆ ರಕ್ತಹಾರ ನೀಡುವ ಪದ್ಧತಿ ಇತ್ತು. ರೆಕ್ಕಿಸಿರಿಯ  ಏಳುವರೆ ಕೋಲು ಉದ್ದದ ಅಣಿಗೆ ಬಿಳಿಯ ಶಾಸ್ತ್ರದ ಹುಂಜ ಕಟ್ಟುವ ಪದ್ಧತಿ ಈಗಲೂ ಕೆಲವೆಡೆ ಇದೆ. ಮುಂದೆ ನಡೆದ ವೈದಿಕ ಮತ್ತು ಜೈನ ಧರ್ಮದ ಪ್ರಭಾವದಿಂದ ರೆಕ್ಕಿಸಿರಿಯ ಅಣಿಗೆ ಬಿಳಿಯ ಶಾಸ್ತ್ರದ ಹುಂಜ ಕಟ್ಟುವ ಪದ್ದತಿ ನಿಂತು ಆ ಜಾಗಕ್ಕೆ ಕೋಳಿಯ ಚಿತ್ರವನ್ನು ಬಿಡಿಸಿ ಪರ್ಯಾಯ ವ್ಯವ್ಸಸ್ಥೆ ಮಾಡಿದುದನ್ನೂ ಕಾಣಬಹುದು.


Kerala Rekkisiri in Karnataka Showing Runda (head) of demon 


ನಾನು ಕೇರಳದ ಗಡಿಯಲ್ಲಿ ನೋಡಿದ ರಕ್ತೇಶ್ವರಿ ಕೋಲದಲ್ಲಿ ಕೋಳಿಯ ತಲೆಕಡಿಯುವುದು ಕಲಶದ ಮುಂದೆ. ಒಂದು ಕಟ್ಟೆಯ ಮೇಲೆ ಅಕ್ಕಿಯ ಹೊಂಡದಲ್ಲಿ ಕಿಸಗಾರ, ಪಿಂಗಾರ ಪುಷ್ಪಗಳಿಂದ ಮತ್ತು ಬಾಳೆಯ ಬಂಬಿನಿಂದ ಅಲಂಕೃತ ಕಲಶವನ್ನು ಇರಿಸಲಾಗುತ್ತದೆ. ಕಲಶದ ಮೇಲೆ ಸುಮಾರು ಮುರು ಟಡಿ ಎತ್ತರದ ವರೆಗೆ ಬಾಲೆಯ ಬಂಬೆಯಲ್ಲಿ ಕಟ್ಟಿರುವ ಪಿಂಗಾರದ ಗೊಂಚಲುಗಳು ಸುಂದರವಾಗಿ ಕಾಣುತ್ತಿವೆ.

ಕಟ್ಟೆಯ ಮೇಲೆ ಸುತ್ತಲೂ ಬಾಲೆಯ ಬಂಬಿನ ಮೆಲೆ ತೆಂಗಿನ ಎಳೆ ಸಿರಿಯ ಅಲಂಕಾರ ಇದೆ.

ಈ ಕಲಶದಲ್ಲಿ ಕಳ್ಳು ತುಂಬಿರುತ್ತದೆ. ಕಳ್ಳು ಚಾಮುಂಡಿಯ ದಾಹ ತಣಿಸಲು ಎನ್ನಲಾಗುತ್ತಿದೆ. 
Rekkisiri  -koluvailu near suratkl 

Rekkisiri Shashi hitl near suratkl 
ರೆಕ್ಕಸಿರಿಯ ಬಿನ್ನ ಕಲ್ಪನೆಗಳ ಚಿತ್ರಗಳನ್ನು ನೋಡಬಹದು. ಇವುಗಳಲ್ಲಿ ಕೆಲವು ಮೂಲತಾನ  ಆಲಡೆ ಕೃತಿಯಲ್ಲಿ ಇದೆ.

ಭಾಗ 2 


ರಕ್ತಬೀಜಾಸುರನನ್ನು ಕೊಂದವಳು ಅಂಬಿಕಾ ದೇವಿ-ದೇವಿ ಭಾಗವತ (ಎಡತೊರೆ ಚಂದ್ರ ಶೇಖರ ಶಾಸ್ತ್ರಿ)

ರಕ್ತಬೀಜಾಸುರನನ್ನು ಕೊಂದವಳು ಪಾರ್ವತಿಯ ಶರೀರದಿಂದ ಹುಟ್ಟಿದ 'ಅಂಬಿಕಾ ದೇವಿ.'. ರಕ್ತಪಾನ ಮಾಡಿದವಳು ಚಾಮುಂಡಿಕಾ ದೇವಿ. ರಕ್ತಬೀಜಾಸುರನ ರಕ್ತದಿಂದ ಅಸಂಖ್ಯ ರಕ್ತ ಬೀಜಾಸುರರು ಹುಟ್ಟುವಾಗ ಅಂಬಿಕಾ ದೇವಿಯು ಪಾರ್ವತಿಯ ಶರೀರದಿಂದ ಹುಟ್ಟಿದ ಕಾಳಿಕಾ ದೇವಿಗೆ ಹೀಗೆ ಹೇಳುತ್ತಾಳೆ: ಓ ಚಾಮುಂಡಕಾ ದೇವಿಯೇ ನೀನು ನಿನ್ನ ಬಾಯಿಯನ್ನು ಬಹಳ ಮಟ್ಟಿಗೆ ದೊಡ್ಡದಾಗಿರುವಂತೆ ವಿಸ್ತರಿಸು .......ಮತ್ತು ನನ್ನ ಆಯುಧಗಳ ಏಟಿನಿಂದ ಉಂಟಾದ ಗಾಯಗಳಿಂದ ಸುರಿವ ರಕ್ತವೆಲ್ಲವನ್ನೂ ನೀನಿ ಬೇಗನೆ ಕುಡಿದು ಬಿಡು. ....ಒಂದು ಹನಿಯನ್ನೂ ಬಿಡದೆ ಪಾನ ಮಾಡುತ್ತಿರು.........ಅಂಬಿಕಾ ದೇವಿ ಹೊಡೆಯುತ್ತಾ ಬಂದಂತೆ ಚಾಮುಂಡಾದೇವಿ ದೇಹದ ಬಾಗಗಳನ್ನು ನುಂಗುತ್ತಾ ಬಂದಳು. ಕೊನೆಗೆ ರಕ್ತಬೀಜಾಸುರನ ರಕ್ತವೆಲ್ಲವನ್ನೂ ಕುಡಿದು ಅವನ್ನನ್ನು ನುಂಗಿದಳು...."



















































No comments:

Post a Comment